ಮಕ್ಕಳು ಯಾವುದೇ ನೃತ್ಯ ಕಲಿಯಲು ಅವರಿಗೆ ದೈಹಿಕ ಹಾಗು ಮಾನಸಿಕ ಅರೋಗ್ಯ ತುಂಬಾ ಮುಖ್ಯ. ವಿದ್ಯಾರ್ಥಿಗಳು ನೃತ್ಯಾಭ್ಯಾಸದ ಮುಂಚೆ ಹಾಗು ನಂತರ ಉತ್ತಮ ಆಹಾರ ಪದ್ಧತಿ ಪಾಲಿಸಿದರೆ ಅವರಲ್ಲಿ ಸ್ನಾಯು ಸೆಳೆತ, ಏಕಾಗ್ರತೆಯ ಕೊರತೆ ದೂರವಾಗಿ ದೇಹದ ಶಕ್ತಿ ಮತ್ತು ಮೆದುಳುನ ಗ್ರಹಣ ಶಕ್ತಿ ಹೆಚ್ಚಾಗಿ ನಿರಾಯಾಸವಾಗಿ ಅವರ ನೃತ್ಯ ಶಿಕ್ಷಣ ಮುಂದುವರೆಯಲು ಸಹಾಯ ವಾಗುತ್ತದೆ .

ನಾವು ದಾಖಲಾತಿ ಸಮಯದಲ್ಲೇ ಪೋಷಕರಿಗೆ ಆಹಾರದ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತೇವೆ . ಅವುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ .

ನೃತ್ಯ ತರಗತಿ/ಅಭ್ಯಾಸ ಮುಂಚೆ ಕೆಳಗಿನ ಆಹಾರ ಪದಾರ್ಥಗಳನ್ನು ಸೇವಿಸಬಾರದು X

 • ಸಕ್ಕರೆಯ ಪದಾರ್ಥಗಳು: ಕ್ಯಾಂಡಿ , ಚಾಕ್ಲೆಟ್ ಮುಂತಾದ ಸಿಹಿ ಪದಾರ್ಥಗಳು ಏಕಾಗ್ರತೆಯನ್ನು ಕಡಿಮೆ ಮಾಡುತ್ತವೆ ಇವುಗಳನ್ನು ಸೇವಿಸಬಾರದು.
 • ಸಂಸ್ಕರಿಸಿದ ಆಹಾರ ಪದಾರ್ಥಗಳು: ಪ್ಯಾಕೆಟ್ ನಲ್ಲಿ ಸಿಗುವ ಯಾವುದೇ ರೆಡಿಮೇಡ್ ಆಹಾರ ಪದಾರ್ಥಗನ್ನು ತಿನ್ನಬಾರದು- ಇವುಗಳಿಂದ ಬಾಯಾರಿಕೆ, ವಾಕರಿಕೆ & ಸ್ನಾಯು ಸೆಳೆತ ಉಂಟಾಗುವ ಅವಕಾಶ ಹೆಚ್ಚಿರುತ್ತದೆ.
 • ಸೋಡಾ & ಎಣ್ಣೆಯಲ್ಲಿ ಕರಿದ ಪದಾರ್ಥಗಳು: ಇವುಗಳಿಂದ ಮಕ್ಕಳಲ್ಲಿ ಹೊಟ್ಟೆ ಉಬ್ಬಸ , ಅಜೀರ್ಣ ಉಂಟಾಗುತ್ತದೆ
 • ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಬಾರದು: ಇದಕ್ಕೆ ವಿರುದ್ಧ ವಾಗಿ ಹೊಟ್ಟೆ ತುಂಬಾ ಊಟ ಮಾಡಿ ಸಹಾ ಅಭ್ಯಾಸ ಮಾಡಬಾರದು . ನೃತ್ಯ ಅಭ್ಯಾಸದ ಮೂವತ್ತು ನಿಮಿಷ ಏನು ತಿನ್ನದೇ ಇರುವುದು ಉತ್ತಮ

ನೃತ್ಯ ತರಗತಿ/ಅಭ್ಯಾಸ ಮುಂಚೆ ಕೆಳಗಿನ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ 🙂

 • ಪ್ರೋಟೀನ್ ಯುಕ್ತ ಆಹಾರ ಪದಾರ್ಥಗಳು: ಪ್ರೊಟೀನ್ ದೇಹಕ್ಕೆ ಅವಶ್ಯವಾದ ಶಕ್ತಿಯನ್ನು ಒದಗಿಸುತ್ತದೆ . ಕೆಲವು ಪ್ರೊಟೀನ್ ಯುಕ್ತ ಆಹಾರಪದಾರ್ಥಗಳೆಂದರೆ – ಮೊಳಕೆ ಯೊಡೆದ ಕಾಳು , ಹಸಿರು ಸೊಪ್ಪು, ಕಡಲೆ ಬೀಜ, ಹಸಿ ಮುಸುಕಿನ ಜೋಳ ತೆನೆ, ಮೊಟ್ಟೆ , ಬಾದಾಮಿ , ಓಟ್ಸ್
 • ಹಣ್ಣು & ತರಕಾರಿಗಳು: ಹೊಟ್ಟೆಯನ್ನು ಹಗುರವಾಗಿರಿಸಿ ದೇಹಕ್ಕೆ ಶಕ್ತಿ ಯನ್ನು ನೀಡಲು ಯಾವುದೇ ಹಣ್ಣು ಮತ್ತು ತರಕಾರಿಯನ್ನು ಮೇಲಿನ ಪ್ರೊಟೀನ್ ಯುಕ್ತ ಆಹಾರ ಪದಾರ್ಥಗಳೊಂದಿಗೆ ಅಥವಾ ಹಾಲು ಮತ್ತು ಮೊಸರೊಂದಿಗೆ ಮಕ್ಕಳಿಗೆ ನೀಡಬಹುದು.
 • ಧಾನ್ಯಗಳು – ಧಾನ್ಯಗಳಿಂದ ಕೂಡಿದ ಯಾವುದೇ ಆಹಾರ ನೃತ್ಯ ಅಭ್ಯಾಸಕ್ಕೆ ಸಹಾಯಕ
 • ಪೊಟ್ಯಾಷಿಯಂ ಯುಕ್ತ ಆಹಾರ: ನೃತ್ಯ ಅಭ್ಯಾಸದಿಂದ ಬರುವ ಸ್ನಾಯು ಸೆಳೆತ ವನ್ನು ತಡೆಯಲು ಪೊಟ್ಯಾಸಿಯಂ ಇರುವ ಆಹಾರ ಸೇವಿಸಬೇಕು ಉದಾಹರಣೆಗೆ ಬಾಳೆಹಣ್ಣು , ಕಿತ್ತಳೆ ಹಣ್ಣು , ಟೊಮೊಟೊ + ಸೌತೆಕಾಯಿ ತುಂಡುಗಳಿಗೆ ಉಪ್ಪು ನಿಂಬೆಹಣ್ಣಿನ ರಸ ಸೇರಿಸಿ ತಯಾರಿಸಿದ ಸಲಾಡ್ ಇದಕ್ಕೆ ಬೇಕಿದ್ದಲ್ಲಿ ಕ್ಯಾರಟ್ , ಬೀಟ್ರೂಟ್ , ಮೊಳಕೆ ಒಡೆದ ಕಾಲನ್ನು ಸೇರಿಸಬಹುದು. ಗೋಧಿಹಿಟ್ಟಿನ ಚಪಾತಿಗೆ ಯಾವುದೇ ತರಕಾರಿಯ ಪಲ್ಯ . ಡ್ರೈ ಫ್ರೂಟ್ಸ್
 • ನೀರು ಮತ್ತು ಪಾನೀಯಗಳುನಿಂಬೆ ಹಣ್ಣಿನ ರಸ , ಮಜ್ಜೆಗೆ , ಮನೆಯಲ್ಲೇ ತಯಾರಿಸಿದ ಪಾನಕ ಹೀಗೆ ಏನಾದರೂ ತರಗತಿಯ ಮುಂಚೆ ಕುಡಿಯುವುದರಿಂದ ದೇಹ ವನ್ನು ನಿರ್ಜಲೀಕರಣ ( ಡಿಹೈಡ್ರಾಶನ್ ) ದಿಂದ ತಪ್ಪಿಸಬಹುದು .

ನೃತ್ಯ ತರಗತಿ/ ಅಭ್ಯಾಸದ ನಂತರ ತೆಗೆದುಕೊಳ್ಳ ಬೇಕಾದ ಆಹಾರ ಪದಾರ್ಥಗಳು

 • ನೀರು: ಅಭ್ಯಾಸದ ನಂತರ ದೇಹ ದಣಿದಿರುತ್ತದೆ ಅದನ್ನು ನಿವಾರಿಸಲು ಹೆಚ್ಚಾಗಿ ನೀರನ್ನು ಸೇವಿಸಬೇಕು.
 • ತಾಜಾ ಹಣ್ಣು / ತರಕಾರಿಗಳು: ದೇಹ ಡಾ ಗ್ಲೂಕೋಸ್ ಮತತ್ ಕಡಿಮೆ ಯಾಗಿರುವುದರಿಂದ ಯಾವುದೇ ತಾಜಾ ಹಣ್ಣು ಅಥವಾ ತರಕಾರಿ ಯುಕ್ತ ಆಹಾರ ಸೇವಿಸಿದರೆ ದೇಹ ಮೊದಲಿನ ಗುಣಮಟ್ಟ ಕಾಯ್ದುಕೊಳ್ಳಲು ಉತ್ತಮ ವಾಗುತ್ತದೆ . ಉದಾಹರಣೆಗೆ ಆಲೂಗಡ್ಡೆ , ಮೊಸರು, ಟೊಮೇಟೊ, ಡ್ರೈ ಫ್ರೂಟ್ಸ್ , ಹಣ್ಣಿನ ರಸ .

ನಮ್ಮ ದೇಹದ ಆರೋಗ್ಯವನ್ನು ಸರಿಯಾಗಿ ಪಾಲಿಸಿದಲ್ಲಿ ನಮ್ಮ ಏಕಾಗ್ರತೆ ಮತ್ತು ಶಕ್ತಿ ಉತ್ತಮವಾಗಿ ಅದರ ಪರಿಣಾಮ ನಮ್ಮ ನೃತ್ಯ ಕಲಿಕೆಯನ್ನು ಉತ್ತಮಗೊಳಿಸುತ್ತದೆ . ನೃತ್ಯ ಪಟುಗಳು ಉತ್ತಮ ಆಹಾರ ಪದ್ಧತಿ ಅನುಸರಿಸುವುದು ತುಂಬಾ ಮುಖ್ಯ ಇದರಿಂದ ಅನವಶ್ಯಕವಾದ ಖಿನ್ನತೆ, ನಿಶ್ಯಕ್ತಿ, ಸ್ನಾಯು ಸೆಳೆತ , ನರ ದೌರ್ಬಲ್ಯ ಹೇಗೆ ಅನೇಕ ಸಮಸ್ಯೆಗಳನ್ನು ತಡೆಯಬಹುದು.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!!