ಎಲ್ಲ ಪವಿತ್ರ ಗ್ರಂಥಗಳಲ್ಲಿಯೂ ನಮ್ಮ ಜೀವನಕ್ಕೆ ಬೇಕಾದ ಮೌಲ್ಯಗಳ ಬಗ್ಗೆ ತಿಳಿಸಲಾಗಿದೆ . ರಾಮಾಯಣದಲ್ಲಿ
ಬಂದು ಹೋಗುವ ಅನೇಕ ಪಾತ್ರಗಳು ನಾವು ಅನುಸರಿಸಬೇಕಾದ , ಮೈಗೂಡಿಸಿಗುಣಗಳುಕೊಳ್ಳಬೇಕಾದ ಅನೇಕ ಗುಣಗಳನ್ನು ನಮಗೆ ಪರಿಚಯಿಸುತ್ತವೆ .

ಅವು ಗಳಲ್ಲಿ ಇಂದಿನ ಪೀಳಿಗೆಗೆ ನಾವು ಕಲಿಸಲೇಬೇಕಾದ ಕೆಲವು  :-

1. ತಂದೆ – ತಾಯಿ ಯನ್ನು ಗೌರವಿಸುವುದು ನಮ್ಮ ಆಧ್ಯ ಕರ್ತವ್ಯ:- ತಂದೆ ದಶರಥ ನ ಅಪ್ಪಣೆಯಂತೆ ರಾಜ್ಯವನ್ನು ತೊರೆದು ೧೪ ವರ್ಷ ವನವಾಸಕ್ಕೆ ಹೋರಾಟನು ಶ್ರೀ ರಾಮ . ಇಂದಿನ ಪೀಳಿಗೆಗೆ ಹಾಗು ಯುಗಕ್ಕೆ ಇದು ಅವಾಸ್ತವ ಆದರೂ ತಕ್ಕ ಮಟ್ಟಿಗೆ ಮಕ್ಕಳು ತಮ್ಮ ಪೋಷಕರನ್ನು ಗೌರವಿಸಲು ಕಲಿಯಲು ಶ್ರೀರಾಮನ ಉದಾಹರಣೆ ಬಹಳಷ್ಟು ಸೂಕ್ತ .

2. ಒಗ್ಗಟ್ಟಿನಲ್ಲಿ ಬಲವಿದೆ:- ರಾಮಾಯಣದಲ್ಲಿ ನಮಗೆ ಒಗ್ಗಟ್ಟಿನ ಮಹತ್ವವನ್ನು ತಿಳಿಸುವ ಬಹಳಷ್ಟು ಸಂದರ್ಭ ಗಳಿವೆ. ಲಕ್ಷ್ಮಣನು ರಾಮನ ಇಚ್ಚೆಗೆ ವಿರೋಧವಾಗಿ ಅಣ್ಣನ ಜೊತೆ ಕಾಡಿಗೆ ಹೊರಡಲು ಸಿದ್ಧನಾಗುತ್ತಾನೆ , ಭರತನು ರಾಮಾನು ತ್ಯಜಿಸಿದ ರಾಜ್ಯ ಕ್ಕೆ ರಾಜನಾಗಲು ಮುಂದೆ ಬರದೇ ರಾಮನ ಬರುವಿಕೆಗೆ ಕಾಯುತ್ತಾನೆ – ಇವೆಲ್ಲ ಕುಟುಂಬದಲ್ಲಿ ಸೋದರರ ನಡುವೆ ಕಷ್ಟಕಾಲದಲ್ಲಿ ಒಗ್ಗಟ್ಟು ಇದ್ದರೆ ಎಂತಹ ಕಷ್ಟವನ್ನಾದರೂ ಜಯಿಸಬಹುದು ಎಂದು ನಮಗೆ ತಿಳಿಸುತ್ತವೆ .

3. ನಿಷ್ಠೆ ಮತ್ತು ನಂಬಿಕೆ:- ರಾಮನಿಗೆ ತನ್ನ ತಂದೆಯ ಮಾತಿನ ಬಗ್ಗೆ ಇದ್ದ ನಂಬಿಕೆ ಹಾಗು ತನ್ನ ಕರ್ತವ್ಯ ದ ಬಗ್ಗೆ ಇದ್ದ ನಿಷ್ಠೆ , ಲಕ್ಷ್ಮಣನಿಗೆ ತನ್ನ ಅಣ್ಣನ ಬಗ್ಗೆ ಇದ್ದ ನಿಷ್ಠೆ , ಸೀತೆಗೆ ತನ್ನ ಪತಿ ಯ ನಿರ್ಣಯ ಬಗ್ಗೆ ಇದ್ದ ನಂಬಿಕೆ, ಹನುಮಂತ ನಿಗೆ ತನ್ನ ರಾಮನ ಬಗ್ಗೆ ಇದ್ದ ಸ್ವಾಮಿ ನಿಷ್ಠೆ, ಸೀತೆ ಯನ್ನು ರಾವಣನು ಅಪಹರಿಸಿದಾಗ ರಾಮ ಬೇಕಿದ್ದರೆ ಮರು ವಿವಾಹ ವಾಗಬಹುದಿತ್ತು ಆದರೆ ರಾಮ ಸೀತೆಯ ನಂಬಿಕೆಯನ್ನು ಹುಸಿ ಮಾಡಲಿಲ್ಲ . ಹೀಗೆ ಅದೆಷ್ಟೋ ಉದಾಹರಣೆಗಳು ನಮಗೆ ನಿಷ್ಠಾವಂತರಾಗಿರಲು ಪ್ರೇರಣೆಯನ್ನು ನೀಡುತ್ತವೆ .

4. ಕರ್ತವ್ಯ ಪಾಲನೆ:- ಎಷ್ಟೇ ಕಷ್ಟ ಬಂದರೂ ಶ್ರೀ ರಾಮ ತನ್ನ ಕರ್ತವ್ಯ ಪಾಲಿಸುವುದನ್ನು ಮರೆಯಲಿಲ್ಲ. ಆದರ್ಶ ಮಗನಾಗಿ, ರಾಜ ನಾಗಿ ತನ್ನ ಕುಟುಂಬದ ಹಾಗು ಪ್ರಜೆಗಳ ಹಿತವನ್ನು ಕಾಪಾಡಿದನು. ನಾವು ನಮ್ಮ ಮಕ್ಕಳಿಗೆ ರಾಮನ ಈ ಗುಣದ ಬಗ್ಗೆ ತಿಳಿಸಬೇಕು ಯಾವುದೇ ಕೆಲಸ ವಾಗಲಿ ನಿಷ್ಠೆ ಯಿಂದ ಮಾಡುವ ಪರಿಯನ್ನು ತಿಳಿ ಹೇಳಬೇಕು.

5. ಯಾರನ್ನು ಕೆಳಮಟ್ಟದ ದೃಷ್ಟಿಯಿಂದ ನೋಡಬಾರದು:– ಸೀತೆಯನ್ನು ರಕ್ಷಿಸಲು ಅಳಿಲಿನಿಂದ ಹಿಡಿದು ಎಲ್ಲ ವಾನರ ಸೇನೆ ರಾಮನ ಸಹಾಯಕ್ಕೆ ನಿಂತರು ಈ ಕಪಿ ಸೇನೆ ರಾಕ್ಷಸರನ್ನು ಸೋಲಿಸಬಹುದೇ ?ಎಂದು ರಾಮ  ಭಾವಿಸಲಿಲ್ಲ . ಹಾಗೆಯೇ ಶಬರಿ ಯ ಪ್ರೀತಿಗೆ ಯಾವುದೇ ತಾರತಮ್ಯ ತೋರದ ಶ್ರೀರಾಮ ತಲೆ ಬಾಗಿದನು . – ಈ ಉದಾಹರಣೆ ಗಳಿಂದ ನಾವು ಮಕ್ಕಳಿಗೆ ಯಾವುದೇ ಆಧಾರದ ಮೇಲೆ ನಮ್ಮ ಸ್ನೇಹಿತರನ್ನಾಗಲಿ, ಸಹಪಾಠಿಗಳನ್ನಾಗಲಿ ಕೀಳಾಗಿ ನೋಡಬಾರದು ಎಂಬ ವಿಷಯವನ್ನು ತಿಳಿಸಬಹುದು.

6. ಕೆಟ್ಟ ಸಹವಾಸದಿಂದ ನಮಗೆ ಕೆಟ್ಟದ್ದೇ ಆಗುತ್ತದೆ:- ಕೈಕೇಯಿ ಗೆ ರಾಮನ ಬಗ್ಗೆ ಎಷ್ಟೇ ಪ್ರೀತಿ ಇದ್ದರೂ ಅವಳು ಅವಳ ಸಹಾಯಕಿ ಮಂಥರೆಯ ಸಹವಾಸ ದೋಷದಿಂದ ರಾಮನಿಗೆ ಕೆಟ್ಟದನ್ನು ಬಯಸುತ್ತಾಳೆ …ಕೊನೆಗೆ ಇದರಿಂದ ಅವಳ ಮಗ ಭರತನೇ ಅವಳನ್ನು ದ್ವೇಷಿಸುತ್ತಾನೆ – ನಾವು ಒಳ್ಳೆಯ ಸಹವಾಸ ದಲ್ಲಿ ಇರಬೇಕು ಎಂಬುದನ್ನು ನಾವು ಕೈಕೇಯಿ ಯ ಉದಾಹರಣೆಯಿಂದ ಕಲಿಯಬಹುದು

ಇಲ್ಲಿ ನಾನು ತಿಳಿಸಲು ಪ್ರಯತ್ನಿಸಿರುವುದು ನನ್ನ ಅಭಿಪ್ರಾಯದಂತೆ ಕೆಲವು ಉಪಯುಕ್ತ ಗುಣಗಳು ಆದರೆ ನಮಗೆ ತಿಳಿದಂತೆ ನಾವು ಇನ್ನು ಅದೆಷ್ಟೋ ಮೌಲ್ಯ ಗಳನ್ನೂ ಶ್ರೀರಾಮನಿಂದ , ರಾಮಾಯಣದ ಅನೇಕ ಪಾತ್ರಗಳಿಂದ ಕಲಿಯಬಹುದು…ಅಲ್ಲವೇ?