ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಓದುವ ಹವ್ಯಾಸ/ಕಲೆ ಬೆಳೆಸುವುದರಿಂದ ಅವರು ಬೆಳೆದ ಮೇಲೆ ಇದರಿಂದ ಅವರ ಪಠ್ಯ ಪುಸ್ತಕಗಳನ್ನೂ , ದಿನಪತ್ರಿಕೆ ಹಾಗು ಬೇರೆ ವಿಷಯಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ.

ನಿಮ್ಮ ಮಗುವಿನಲ್ಲಿ ಓದುವ ಹವ್ಯಾಸ ಬೆಳೆಸಲು ಇಲ್ಲಿವೆ ಸುಲಭವಾದ 5 ಸೂತ್ರಗಳು:-

  1. ಗಟ್ಟಿಯಾಗಿ ಓದುವ ಅಭ್ಯಾಸ ಮಾಡಿಗಟ್ಟಿಯಾಗಿ ಓದುವುದರಿಂದ ಅವಾರ ಓದುವ ವೇಗ ಕಡಿಮೆ ಯಾಗಿ ಪದಗಳನ್ನು ಅರ್ತಿಮಾಡಿಕೊಳ್ಳುವ ಪ್ರಕ್ರಿಯೆ ಬೆಳೆಯಲು ಅವಕಾಶ ಸಿಗುತ್ತದೆ. ಮಕ್ಕಳು ಓದುವುದರಿಂದ ಅವರು ಕೇವಲ ನೋಡುವುದೇ ಅಲ್ಲದೆ ಶಬ್ದ ಗಳನ್ನೂ ಕೇಳುವುದರಿಂದಲೂ ಅವರ ಗ್ರಹಣ ಶಕ್ತಿ ಹೆಚ್ಚಾಗುತ್ತದೆ. ಅವರೇ ಅಲ್ಲದೆ ಕೆಲವೊಮ್ಮೆ ನೀವು ಓದಿ ಅವರು ಕೇಳುವಂತೆ ಮಾಡಬಹುದು.

  2. ವಯಸ್ಸಿಗೆ ಅನುಗುಣವಾದ ಪುಸ್ತಕಗನ್ನು ಕೊಡಿ: ಮಕ್ಕಳಿಗೆ ಕೊಡುವ ಪುಸ್ತಕಗಳು ಅವರ ಓದುವ ಅಭ್ಯಾಸ ಕಠಿಣ ಗೊಳಿಸದಂತೆ ಜಾಗ್ರತೆ ವಹಿಸಿ. ಅವರು ಓದುವ ಪುಸ್ತಕ ದಲ್ಲಿನ 90% ಪದಗಳು ಯಾರದೇ ಸಹಾಯ ವಿಲ್ಲದೆ ಗುರುತಿಸುವಂತಿರಲಿ. ಓದುವಾಗ ಅವರು ಪದೇ ಪದೇ ನಿಲ್ಲಿಸಿದರೆ ಅವರು ಓದುವ ವಿಷಯದ ಮೇಲೆ ಅವರ ಗಮನ ಕಡಿಮೆಯಾಗುವ ಸಾಧ್ಯತೆಗಳೇ ಹೆಚ್ಚು . ಆದ್ದರಿಂದ ಅವರ ವಯಸ್ಸಿಗೆ ಅನುಗುಣವಾದ ವಿಷಯ ಹಾಗು ಸರಳತೆ ಯ ಆಧಾರದ ಮೇಲೆ ಅವರಿಗೆ ಪುಸ್ತಕಗಳನ್ನು ಕೊಡಿ.

  3. ಮಕ್ಕಳ ಶಿಕ್ಷಕರೊಂದಿಗೆ ಚರ್ಚಿಸಿಮಕ್ಕಳು ಸುಲಲಿತವಾಗಿ ಓದಲು ಕಷ್ಟ ಪಡುತ್ತಿದ್ದಾರೆ ಎಂದಾದಲ್ಲಿ ಅವರ ಶಬ್ದಕೋಶ ಬೆಳೆಸಲು ಅವರ ಶಿಕ್ಷಕರ ಸಲಹೆಗಳು ಸಹಾಯವಾಗುತ್ತವೆ. ಮಕ್ಕಳ ವ್ಯಾಕರಣ , ಭಾಷೆ, ಆತ್ಮವಿಶ್ವಾಸ ಬೆಳೆಸಲು ಕೆಲವು ವಿಧಾನಗಳನ್ನು ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆಯಿರಿ. ಮಕ್ಕಳ ತರಗತಿಯಲ್ಲಿ ನ ಪಠ್ಯ ವಿಷಯಗಳಿಗೆ ಸಂಬಂಧಿಸಿದ ಬೇರೆ ಆಕರ್ಷಣೀಯ ಪುಸ್ತಕಗಳನ್ನು ಕೊಟ್ಟಾಗ ಅವರಿಗೆ ಈಗಾಗಲೇ ಆ ವಿಷಯದ ಅರಿವು ಇರುವುದರಿಂದ ಅವರ ಓದಿನ ಆಸಕ್ತಿ ಹೆಚ್ಚಿ ಸಲೀಸಾಗಿ ಓದುವ ಅಭ್ಯಾಸ ಬೆಳೆಯುತ್ತದೆ.

  4. ಓದಿರುವುದನ್ನೇ ಮತ್ತೆ ಓದಲಿ: ಸರಾಗವಾಗಿ ಓದಲು ಹಿಂದೆ ಓದಿರುವುದನ್ನೇ ಪುನರಾವರ್ತಿಸಿದಾಗ ಅವರು ಓದಿರುವುದನ್ನು ಅರ್ಥಮಾಡಿಕೊಳ್ಳುವ ಕ್ಷಮತೆ ಹೆಚ್ಚುತ್ತದೆ ಅಲ್ಲದೆ ವೇಗವಾಗಿ ಓದುವ ಅಭ್ಯಾಸ ವಾಗುತ್ತದೆ .

  5. ಅವರು ಓದಿರುವುದರ ಬಗ್ಗೆ ಮಾತಾಡಿ ಚರ್ಚಿಸಿಅವರು ಓದುವ ಪ್ರಕ್ರಿಯೆ ಕೇವಲ ಅವರಿಗೆ ಸೀಮಿತವಾದಲ್ಲಿ ಅವರಿಗೆ ಬೇಜಾರಾಗುತ್ತದೆ . ಅವರನ್ನು ಪ್ರೋತ್ಸಾಹಿಸಲು ಅವರ ಓದಿನ ಪ್ರಕ್ರಿಯೆ ಯಲ್ಲಿ ನೀವು ಭಾಗವಾಗಿ …. ಓದುವ ಮುಂಚೆ, ಓದುವ ಸಮಯದಲ್ಲಿ, ಓದಿದ ನಂತರ ಕೆಲವು ಪ್ರಶ್ನೆಗಳನ್ನು ಕೇಳಿ ಅವರ ಅನುಭವ ತಿಳಿದುಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ
  6.  

ಓದುವ ಮುಂಚೆಈ ಪುಸ್ತಕವನ್ನು ಏಕೆ ಓದುತ್ತಿದ್ದೀಯ ? ಇದರಲ್ಲಿ ನಿನಗೆ ಆಸಕ್ತಿ ಯಾದ ವಿಷಯ ವೇನಿದೆ ?

ಓದುವ ಸಮಯದಲ್ಲಿಪುಸ್ತಕದಲ್ಲಿ / ಕಥೆಯಲ್ಲಿ ಏನು ನಡೆಯುತ್ತಿದೆ ? ನೀನು ಅಂದುಕೊಂಡಂತೆ ಇದೆಯಾ ? ಏನಾಗುವ ಸಾಧ್ಯತೆ ಇದೆ ?

ಓದಿದ ನಂತರಪುಸ್ತಕದ ಸಾರವನ್ನು ಒಂದು ವಾಕ್ಯದಲ್ಲಿ ಹೇಳಲು ಪ್ರಯತ್ನಿಸುವೆಯಾ ? ಇಂತಹ ಬೇರೆ ಪುಸ್ತಕ ಓದಿದೆಯಾ ? ಮುಂದೆ ಇಂತಹ ಪುಸ್ತಕ ಓದಲು ಇಚ್ಛಿಸು ವೆಯಾ ? ನಿನ್ನ ಸ್ನೇಹಿತರಿಗೆ ಇದನ್ನು ಓದಲು ಸಲಹೆ ನಿಡುವೆಯಾ ?