ಇಂದಿನ ಬಹಳಷ್ಟು ಪೋಷಕರು ಮಕ್ಕಳ ಲೌಕಿಕ ಆನಂದ ಗಳ ಅವಶ್ಯಕತೆ ಪೂರೈಸುವುದೇ ನಮ್ಮ ಕರ್ತವ್ಯ ಎಂದು ಭಾವಿಸಿ ಅವರಿಗೆ ಐಷಾರಾಮಿ ಜೀವನ ಶೈಲಿ ಯ ಅಭ್ಯಾಸ ಬಾಲ್ಯದಿಂದಲೇ ಮಾಡುತ್ತಿದ್ದೇವೆ. ಆದರೆ ಪೋಷಕರಾದ ನಾವು ಅವರಿಗೆ ನೆಚ್ಚಿನ ವಸ್ತುಗಳನ್ನು ಕೊಂಡು ಕೊಡುವುದು, ನೆಚ್ಚಿನ ಸ್ಥಳಕ್ಕೆ ಕರೆದುಕೊಂಡು ಹೋಗುವುದು, ನೆಚ್ಚಿನ ಕೋಚಿಂಗ್ ತರಗತಿಗೆ ಸೇರಿಸುವುದು -ಇವುಗಳೆಲ್ಲವುಗಳಿಗಿಂತ ಮುಖ್ಯವಾಗಿ ಅವರಲ್ಲಿ ಒಳ್ಳೆಯ ಗುಣವಿಶೇಷಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿದರೆ ಅವರು ಸಂಸ್ಕಾರವಂತ ರಾಗಲು ಸಾಧ್ಯಾವಾಗುತ್ತದೆ.

ಇಂದಿನ ಯಾಂತ್ರಿಕ ಜೀವನದಲ್ಲಿ ನಾವು ಮಕ್ಕಳ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಅವರ ಮಾನಸಿಕ ಅರೋಗ್ಯ , ಅವರ ಸಾಮಾಜಿಕ ನಡುವಳಿಕೆಯ ಬಗ್ಗೆ ಹೆಚ್ಚಿನ ಗಮನ ನೀಡುವಲ್ಲಿ ವಿಫಲರಾಗುತ್ತಿದ್ದೇವೆ. ಚಿಕ್ಕವಯಸ್ಸಿನಿಂದಲೇ ಮಕ್ಕಳೊಂದಿಗಿನ ನಮ್ಮ ಸಂಬಂಧ ಸುಧಾರಣೆ ಯಾಗದಿದ್ದರೆ ಅವರು ವಯಸ್ಕರಾದಂತೆ ಮಾನಸಿಕ ಒತ್ತಡ ಗಳಿಗೆ ಸಿಲುಕಿ ಆರೋಗ್ಯವಂತ ಜೀವನಕ್ಕೆ ದೂರವಾಗುತ್ತಾರೆ.

ಇಂದು ನಾವು ಮಕ್ಕಳ ತಪ್ಪುಗಳನ್ನು ಸಕಾರಾತ್ಮಕವಾಗಿ ತಿದ್ದುವ ಕೆಲವು ಉಪಾಯಗಳ ಬಗ್ಗೆ ತಿಳಿಯೋಣ.

  1. ಭಯ ಪಡಿಸಬೇಡಿ/ ತೀವ್ರ ವಾಗಿ ಪ್ರತಿಕ್ರಯಿಸಬೇಡಿ: ಪೋಷಕರೆಂದರೆ ಮಕ್ಕಳಿಗೆ ಭಯಕ್ಕಿಂತ ಗೌರವ ವಿರುವುದು ಮುಖ್ಯ , ಆದ್ದರಿಂದ ಮಗು ತಪ್ಪು ಮಾಡಿದ ವಿಷಯ ನಿಮಗೆ ತಿಳಿದ ತಕ್ಷಣ ನಿಮ್ಮ ಪ್ರತಿಕ್ರಿಯೆ ಅವರಲ್ಲಿ ಭಯಮೂಡಿಸುವಂತೆ ಇರಬಾರದು. ಅವರಲ್ಲಿ ಭಯ ಮೂಡಲು ಶುರುವಾದಾಗ ಅವರು ಸುಳ್ಳು ಹೇಳುವುದನ್ನು ಕಲಿಯುವ ಅವಶ್ಯಕತೆ ಹೆಚ್ಚಿರುತ್ತದೆ . ಆದ್ದರಿಂದ ಕಿರುಚುವುದನ್ನು ಮಾಡಬೇಡಿ.
  2. ತಪ್ಪು ಮಾಡುವ ಹಿಂದಿನ ಉದ್ದೇಶ ತಿಳಿಯಲು ಪ್ರಯತ್ನಿಸಿ : ಯಾವ ಮಗುವು ಕೆಟ್ಟದ್ದಲ್ಲ ..ಕೆಟ್ಟ ವರ್ತನೆಯನ್ನು ಹೊಂದಿರುತ್ತಾರೆ ಅಷ್ಟೇ – ನಮ್ಮ ಉದ್ದೇಶ ಮಗುವಿನ ತಪ್ಪನ್ನು ತಿದ್ದುವುದು ಹಾಗಾಗಿ ತಪ್ಪುಮಾಡಲು ಅವರಿಗೆ ಪ್ರೇರಣೆ ಏನು ಎಂದು ತಿಳಿದುಕೊಂಡಾಗ ಮಾತ್ರ ಅವರ ವರ್ತನೆ ಸರಿಮಾಡಲು ಸಹಾಯವಾಗುತ್ತದೆ .
  3. ನಕಾರಾತ್ಮಕವಾಗಿ ನಿಂದಿಸಬೇಡಿ/ಅಧಿಕಾರ ಚಲಾಯಿಸಬೇಡಿ : ಅವರನ್ನು ಮಾತಾಡಿ ಅರ್ಥಮಾಡಿಕೊಳ್ಳಲು ಪ್ರತ್ನಿಸದೆ , ನೀನು ಮಾಡಿದ್ದು ತಪ್ಪು , ಹೀಗೆ ಮಾಡಬಾರದು , ಹಾಗೆ ಮಾಡಬಾರದು ಎಂದು ಶುರುಮಾಡಿದರೆ ಅವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಆಗ ನೀವು ಬಯಸಿದ ಯಾವುದೇ ವಿಷಯ ಅವರು ಕಲಿಯಲು ಸಾಧ್ಯವಿಲ್ಲ .
  4. ಅವರ ತಪ್ಪನ್ನು ನಿರ್ಲಕ್ಷಿಸ ಬಾರದು: ಕೆಲವು ಪೋಷಕರು ಅತಿಯಾದ ಪ್ರೀತಿಯನ್ನು ತೋರಿಸಿ ಮಕ್ಕಳು ಮಾಡಿದ್ದು ತಪ್ಪೇ ಅಲ್ಲವೆಂಬಂತೆ ವರ್ತಿಸುತ್ತಾರೆ ..ಇದರಿಂದ ಮಗು ನಕಾರಾತ್ಮಕ ಧೋರಣೆ ಬೆಳೆಸಿಕೊಂಡು ಮುಂದೆ ಅದನ್ನು ತಿದ್ದಲು ಸಾಧ್ಯವಾಗದ ಮಟ್ಟಕ್ಕೆ ಬೆಳೆಯುತ್ತಾರೆ.
  5. ಅವರ ತಪ್ಪನ್ನು ಅವರೇ ಸರಿ ಪಡಿಸಲು ಸಹಕರಿಸಿ: ಅವರು ಮಾಡಿದ ತಪ್ಪಿನ ಅರಿವು ಮೂಡಿಸಿ ಅವರು ಮಾಡಿರುವುದು ಸರಿಯಲ್ಲ ತಪ್ಪು ಅದನ್ನು ಯಾವ ರೀತಿಯಲ್ಲಿ ಸರಿ ಪಡಿಸಬಹುದು ಎಂಬ ಬಗ್ಗೆ ವಿವರಿಸಿ, ಸರಿ ಮಾಡಿಸಿಕೊಳ್ಳುವುದರಿಂದ ಅವರಿಗೆ ಆಗುವ ಲಾಭಗಳ ಬಗ್ಗೆ ಚರ್ಚಿಸಿ ನಿಮ್ಮ ಸಂಭಾಷಣೆ ತಪ್ಪಿನ ಮೇಲೆ ಕೇಂದ್ರೀಕೃತ ವಾಗಿರದೆ ತಪ್ಪು ಸರಿ ಮಾಡುವುದರೆ ಬಗ್ಗೆ ಇರುವಂತೆ ನೋಡಿಕೊಳ್ಳಿ .
  6. ಅವರಿಗೆ ಸಮಯವನ್ನು ಕೊಡಿ: ನೀವು ಹೇಳಿದ್ದೆಲ್ಲ ಅವರು ಕೇಳಿ , ಕೇಳಿದ್ದ ನ್ನೆಲ್ಲ ಸರಿಯೆಂದು ಒಪ್ಪಿಕೊಂಡು , ಒಪ್ಪಿಕೊಂಡದ್ದನ್ನೆಲ್ಲ ಅವರು ಒಂದೇ ದಿನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದಿಲ್ಲ ನಿಮ್ಮಲ್ಲಿ ತಾಳ್ಮೆ ಹಾಗು ಸಂಯಮ ವಿದ್ದರೆ ನೀವು ಬಯಸಿದ ರೀತಿಯಲ್ಲಿ ಮಕ್ಕಳು ಬೆಳೆಯುತ್ತಾರೆ. ಅದಕ್ಕಾಗಿ ನಿಮ್ಮ ಸಮಯವನ್ನು ಮಕ್ಕಳಿಗೆ ಕೊಡಬೇಕು. ಅವರನ್ನು ಅರ್ಥ ಮಾಡಿಕೊಳ್ಳಬೇಕು. ಒಂದೊಂದು ಮಗು ವಿಷಯವನ್ನು ಸ್ವೀಕರಿಸುವ ಪರಿ ಬೇರೆ ಯದಾಗಿರುತ್ತದೆ. ನಿಮ್ಮ ಮಗುವಿನ ಪರಿ ಏನು ಎಂದು ನೀವು ತಿಳಿದುಕೊಳ್ಳಬೇಕು.
  7.  ಅಭಿನಂದಿಸಿ : ಮಕ್ಕಳೇ ಅವರ ತಪ್ಪನ್ನು ನಿಮ್ಮಲ್ಲಿ ಹಂಚಿಕೊಂಡಾಗ, ತಪ್ಪನ್ನು ತಿದ್ದಿಕೊಂಡಾಗ ಅವರನ್ನು ಮಾತುಗಳಲ್ಲಿ ಅಥವಾ ಚಿಕ್ಕ ಬಹುಮಾನ ನೀಡುವುದರ ಮೂಲಕ ಅಭಿನಂದಿಸಿ ಇದರಿಂದ ನಿಮ್ಮ ಮತ್ತು ಮಗುವಿನ ಸಂಬಂಧ ದಲ್ಲೂ ಸುಧಾರಣೆ ಯಾಗುತ್ತದೆ.

ಮೇಲೆ ತಿಳಿಸಿರುವುದು ನನ್ನ ಅಭಿಪ್ರಾಯದಂತೆ ಹೇಗೆ ಮಕ್ಕಳ ತಪ್ಪನ್ನು ಸಕಾರಾತ್ಮಕವಾಗಿ ತಿದ್ದಬಹುದು ಎಂದು, ನಿಮ್ಮ ಸಲಹೆಗಳನ್ನು ದಯವಿಟ್ಟು ಹಂಚಿಕೊಳ್ಳಿ .